ಖಬರ್ ಲಹರಿಯಾ ಉತ್ತರ ಪ್ರದೇಶದಿಂದ ಪ್ರಸಾರವಾಗುವ ಒಂದು ಪತ್ರಿಕೆ. ಗ್ರಾಮಂತರ ಪ್ರದೇಶಗಳಿಗಾಗಿ ಹಾಗೂ ಸ್ತ್ರೀಯರಿಗಾಗಿಯೇ ಮೀಸಲಾಗಿರುವ ಉತ್ತರ ಪ್ರದೇಶದ ವಾರಪತ್ರಿಕೆ. ಸುಮಾರು ೨೦,೦೦೦ ಕ್ಕೂ ಹೆಚ್ಚು ಪ್ರಸಾರವಿದೆ. ’ಯುನೆಸ್ಕೋ ಸಾಕ್ಷರತಾ ವಿಭಾಗದ ಪ್ರಶಸ್ತಿವಿಜೇತ,' ' ಖಬರ್ ಲಹರಿಯಾ,’ ಪತ್ರಿಕೆ, ನವ-ದೆಹಲಿಯಲ್ಲೂ ತನ್ನದೇ ಆದ ಓದುಗರ ವಲಯವೊಂದನ್ನು ಸೃಷ್ಟಿಸಿಕೊಂಡಿದೆ. == ಮಹಿಳೆಯರು ’ಖಬರ್ ಲಹರಿಯಾ,’ ದ ನಿರ್ಮಾತೃಗಳು == ಉತ್ತರ ಪ್ರದೇಶದ ಗ್ರಾಮೀಣ ಭಾರತದ ಕೆಳವರ್ಗದ ಸ್ತ್ರೀಯರು, "ಖಬರ್ ಲಹರಿಯಾ," ದ ನಿರ್ಮಾತೃಗಳು. ಪತ್ರಿಕೋದ್ಯಮ ತರಬೇತಿ ಪಡೆದ ಮಹಿಳೆಯರ ಗುಂಪಿನ ಕನಸಿನ ಕುಡಿ, ಈ ಪತ್ರಿಕೆಯೆಂಬುದನ್ನು ಮರೆಯುವಂತಿಲ್ಲ. ನವದೆಹಲಿ ಹಾಗೂ ಉತ್ತರ ಪ್ರದೇಶಗಳಲ್ಲಿ ಕಚೇರಿ ಹೊಂದಿರುವ ಲಿಂಗ ಮತ್ತು ಶಿಕ್ಷಣ ಆಧಾರಿತ, ’ ಕೇಂದ್ರ-ನಿರಂತರ್,’ ಆರಂಭಿಸಿದ ’ಖಬರ್ ಲಹರಿಯಾ,’ ಪತ್ರಿಕೆಗೆ ’ಕಿಂಗ್ ಸೆಜೊಂಗ್’ ಸಾಕ್ಷರತಾ ಪ್ರಶಸ್ತಿ,’ ಲಭಿಸಿದೆ. ಪ್ರಶಸ್ತಿಯ ಮೊತ್ತ, ೨೦ ಸಾವಿರ ಡಾಲರ್. == ’ಖಬರ್ ಲಹರಿಯಾ,’ ಹೇಗೆ ಪತ್ರಿಕೋದ್ಯಮದ ದಿಶೆಯನ್ನು ನಿಯಂತ್ರಿಸುತ್ತಿದೆ == ಪತ್ರಿಕೋದ್ಯಮದ ತರಬೇತಿ ನೀಡುವುದರ ಜೊತೆಗೆ, ಬರವಣಿಗೆಯ ಕೌಶಲ್ಯಕ್ಕೆ ಪುರಸ್ಕಾರ ನೀಡುವ, ವರದಿಗಾರಿಕೆಯ ಸಾಮರ್ಥ್ಯವನ್ನು ಉತ್ತಮಗೊಳಿಸುವಲ್ಲಿ, ತಯಾರುಮಾಡುತ್ತಿದೆ. ’ಖಬರ್ ಲಹರಿಯಾ,’ ದಲ್ಲಿ, 'ಗಣ್ಯರ ಸಂದರ್ಶನ', 'ಮಾಹಿತಿ ಕಲೆಹಾಕುವಿಕೆ', 'ಸಂಪಾದನ-ಕೌಶಲ್ಯ', ವನ್ನು ಹರಿತಗೊಳಿಸುವುದು, ಮುಂತಾದವುಗಳು, ಇದರಲ್ಲಿ ಸೇರಿದೆ. == ’ಖಬರ್ ಲಹರಿಯಾ,’ ಪತ್ರಿಕೆಯಲ್ಲಿ ಕಾಣಬರುವ ವರದಿಗಳು == 'ವಿಶೇಷ ವರದಿಗಳು' , 'ರಾಜಕೀಯ' , 'ಅಪರಾಧಗಳು', 'ಸಾಮಾಜಿಕ ಸಮಸ್ಯೆಗಳು', 'ಮನೋರಂಜನೆಯ ಪರಿಕರಗಳು' , ಇವೆ. ಅತಿ-ಹೆಚ್ಚು ಜನಸಂಖ್ಯೆಯನ್ನು ಹೊಂದಿದ, ಉತ್ತರ ಪ್ರದೇಶದ, ’ಚಿತ್ರಕೂಟ,’ ಮತ್ತು ’ಬಂಡಾ,’ ಜಿಲ್ಲೆಗಳ ಒಟ್ಟು ೪೦೦ ಗ್ರಾಮಗಳಿಗೆ ’ಖಬರ್ ಲಹರಿಯಾ,’ ತಲುಪುತ್ತಿದೆ. == ಬಣ್ಣಿಸುವ ರೀತಿ == ’ ವೆಬ್ ಸೈಟ್,’ ಒದಗಿಸುವ ಮಾಹಿತಿ ಪ್ರಕಾರ, ೨೦೦೨ ರಲ್ಲಿ, ಚಿತ್ರಕೂಟದಲ್ಲಿ ಮೊದಲ ’ಖಬರ್ ಲಹರಿಯಾ,’ ಪತ್ರಿಕೆಯ ಪ್ರಕಟಣೆ ಆರಂಭವಾಯಿತು. ಮುಂದೆ ೨೦೦೬ ರಲ್ಲಿ, ಬಂಡಾ ಜಿಲ್ಲೆಯಲ್ಲಿ ಅದರ ಎರಡನೆಯ ಆವೃತ್ತಿ ಆರಂಭಗೊಂಡಿತು. ’ಬುಂದೇಲ್ ಖಂಡ್ ಓದುಗರಿಗೆ’, ಅಲ್ಲಿನ ಸ್ಥಳೀಯ ಭಾಷೆ, ’ಬುಂದೇಲಿ ಪ್ರಾಂತ ಭಾಷೆ,’ ಯಲ್ಲಿ ಪ್ರಕಟಗೊಳುತ್ತಿದೆ. == ಬಾಹ್ಯ ಸಂಪರ್ಕಗಳು == , 2012-11-02 ವೇಬ್ಯಾಕ್ ಮೆಷಿನ್ ನಲ್ಲಿ. 2009-02-06 ವೇಬ್ಯಾಕ್ ಮೆಷಿನ್ ನಲ್ಲಿ.